ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮೊಂದಿಗೆ ಇಲ್ಲ ಎಂದು ಒಪ್ಪಿಕೊಳ್ಳಲು ಕಷ್ಟ ಆದರೆ ದೈಹಿಕವಾಗಿ ಅಪ್ಪು ಇಲ್ಲದೆ ಇರಬಹುದು ಮಾನಸಿಕವಾಗಿ ಅಪ್ಪು ಸದಾ ನಮ್ಮೊಂದಿಗೆ ಇದ್ದಾರೆ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಿನ ಕೂಸಾದ ಗಂಧದ ಗುಡಿ pre release event ನೆನೆ ಅದ್ದೂರಿಯಾಗಿ ನಡೆದಿದೆ ಅಂದ ಹಾಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪುನೀತಪರ್ವ ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿದ್ದು,
ಈ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಸಿನಿಮಾ ರಂಗದ ನಟ ನಟಿಯರು ಹಾಗೂ ರಾಜಕೀಯ ಗಣ್ಯರು ಆಗಮಿಸಿದ್ದರು ಇನ್ನು ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಖುಷಿ ಪಟ್ಟಿದ್ದಾರೆ ಆದರೆ ಯಶ್ ಹೇಳಿದ ಒಂದು ಮಾತಿಗೆ ಅಪ್ಪು ಪುತ್ರಿ ಕೂಡ ಕಣ್ಣೀರು ಹಾಕಿದ್ದಾರೆ ಈ ಕಾರ್ಯಕ್ರಮದಲ್ಲಿ ಅಪ್ಪು ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ,
ಹೌದು ಯಶ್ ಅವರು ಮಾತನಾಡಿರುವುದನ್ನು ಕೇಳಿ ಅಪ್ಪು ಪುತ್ರಿ ವಂದಿತ ಭಾವುಕರಾಗಿದ್ದಾರೆ ಯಶ್ ಅವರು ಮಾತು ಶುರು ಮಾಡಿ ಒಂದು ವರ್ಷದ ಕೆಳಗೆ ಇದೆ ದಿನ ಇರಬಹುದು ನಾನು ಶಿವಣ್ಣ ಮತ್ತು ಅಪ್ಪು ವೇದಿಕೆ ಮೇಲೆ ಡಾನ್ಸ್ ಮಾಡುತ್ತಿದ್ದೆವು ಅದಿನ್ನು ನನ್ನ ತಲೆಯಲ್ಲಿಯೇ ಇದೆ ಎಷ್ಟೋ ದಿನ ಆಗಿತ್ತು ನಾನು ಅವರು ಮಾತನಾಡಿ ಅವತ್ತು ಸಿಕ್ಕಿದ್ವಿ ತುಂಬಾ ಮಾತನಾಡಿದ್ವಿ .
ಅವರು ಅವತ್ತು ಮಾತನಾಡುತ್ತಿದ್ದ ವಿಷಯಗಳು ಅವತ್ತು ಅವರಲ್ಲಿದ್ದ ಹುಮ್ಮಸ್ಸು ಉತ್ಸಾಹ ಅವರನ್ನು ನೋಡಿದಾಗಲೆಲ್ಲ ಒಂದು ನಮಗೆ ಹುಮ್ಮಸ್ಸು ಬರುತ್ತೆ ಎಂದು ಹೇಳಿದ್ದಾರೆ ಅಪ್ಪು ಹಾಗೂ ಯಶ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ