Categories
ಸಿನಿಮಾ

ಮೆಗಾ ನಟಿ ಮಂಜುಳಾ ಅವರ ಮನೆ ಮೊದಲ ಬಾರಿಗೆ ತೋರಿಸ್ತೀವಿ ನೋಡಿ….

ಕನ್ನಡ ಚಿತ್ರರಂಗದಲ್ಲಿ ಎಂಬತ್ತರ ತೊಂಬತ್ತರ ದಶಕದಲ್ಲಿ ಭಾರಿ ಹೆಸರನ್ನು ಮಾಡಿದಂತಹ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಮಂಜುಳಾ ಅವರು ಯಾರಿಗೆ ಗೊತ್ತಿಲ್ಲ ಹೇಳಿ ಹೌದು ಕನ್ನಡ ಸಿನಿ ರಸಿಕರಿಗೆ ಭಾರಿ ಮನರಂಜನೆ ನೀಡಿದ ಇವರು ತಮ್ಮ ಮುವತ್ ನಾಲ್ಕನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದರು. ಹೌದು ಮಂಜುಳಾ ಅವರು ತಮ್ಮ ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು .

ತಮ್ಮ ಬಜಾರಿ ಪಾತ್ರದ ಜತೆಗೆ ವಿಭಿನ್ನ ಪಾತ್ರಗಳಿಂದ ಜನರಿಗೆ ಪರಿಚಯವಾದರೂ ನಟಿ ಮಂಜುಳಾ ಆನಂತರ ಇವರು ನಿರ್ದೇಶಕರಾದ ಅಮೃತಮ್ ಎಂಬುವವರನ್ನು ಮದುವೆಯಾದರು ಯಾವಾಗ ಮಂಜುಳಾ ಅವರು ಮದುವೆಯಾದರು ಎಂಬ ವಿಚಾರ ಚಿತ್ರರಂಗಕ್ಕೆ ತಿಳಿಯುತ್ತದೆ ಆಗ ಇವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆ ಆದವು.

ಅಷ್ಟೇ ಅಲ್ಲ ನಟಿ ಮಂಜುಳಾ ಅವರು ಗಂಡುಬೀರಿ ಪಾತ್ರ ದಲ್ಲಿ ಮಾತ್ರವಲ್ಲ ಸಂಪ್ರದಾಯಸ್ಥ ಪಾತ್ರಗಳಲ್ಲಿಯೂ ಕೂಡ ನಟಿ ಮಂಜುಳಾ ಅವರು ಕಾಣಿಸಿಕೊಂಡಿದ್ದರು ಇವರ ಅಭಿನಯ ವನ್ನು ಇಡೀ ಕರ್ನಾಟಕ ರಾಜ್ಯವೇ ಒಪ್ಪಿ ಹೊಗಳಿತ್ತು ಇಂದಿಗೂ ಕೂಡ ನಟಿ ಮಂಜುಳಾ ಅವರ ನಟನೆ ಇಷ್ಟ ಪಡುವ ಬಹಳಷ್ಟು ಅಭಿಮಾನಿಗಳಿದ್ದಾರೆ ಇವರ ಸಂಪತ್ತಿಗೆ ಸವಾಲು ಸಿನಿಮಾದ ಹಾಡುಗಳು ಬಹಳ ಫೇಮಸ್ ಮತ್ತು ಸಂಪತ್ತಿಗೆ ಸವಾಲು ಸಿನಿಮಾದ ಡೈಲಾಗ್ ಗಳು ಬಹಳ ಫೇಮಸ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಇವರಂತೆ ಅಭಿನಯ ಮಾಡಿ ಸೈ ಅನ್ನಿಸಿಕೊಂಡವರು ಬಹಳಷ್ಟು ಜನರಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ಗೆ ಸೇರಿರುವ ಹೊನ್ನೇನಹಳ್ಳಿಯಲ್ಲಿ ಮಂಜುಳಾ ಅವರು ಜನಿಸಿದ್ದು ನಟಿ ಮಂಜುಳಾ ಅವರು ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಇಲ್ಲಿಯ ಇನ್ನೂ ಚಿಕ್ಕವರಿಂದಲೇ ನಟನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ನಟಿ ಮಂಜುಳಾ ಅವರ ತಂದೆ ಸಬ್ ಇನ್ಸ್ ಪೆಕ್ಟರ್ ಆಗಿ ಇದ್ದರು. ನಟಿ ಮಂಜುಳಾ ಅವರು ಸಾರು ತುಂಬ ನೂರ ಐವತ್ತ್ ಒಂದರಲ್ಲಿ ಜನಿಸಿದರು. ನಟಿ ಮಂಜುಳಾ ಅವರು ಮೇರು ನಟರೊಂದಿಗೆ ಅಂದರೆ ಡಾ ರಾಜ್ ಕುಮಾರ್ ವಿಷ್ಣುವರ್ಧನ್ ಅನಂತ್ ನಾಗ್ ಶಂಕರ್ ನಾಗ್ ಇವರೆಲ್ಲರೊಡನೆ ಅಭಿನಯ ಮಾಡಿದ್ದಾರೆ.

ಮದುವೆಯ ನಂತರ ಅವಕಾಶಗಳು ಕಡಿಮೆ ಆದರೂ ಇವರು ಕುಟುಂಬದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರೂ ಇನ್ನೂ ಅಡುಗೆ ಮಾಡುವಾಗ ಸ್ಟೌವ್ ಬ್ಲಾ ಸ್ಟ್ ಆಗಿ ಅಕಾಲಿಕ ಮ’ರಣ ಹೊಂದಿದ್ದರು ನಟಿ ಮಂಜುಳಾ ಇವರ ಈ ಸಾ’ವನ್ನು ಯಾರೂ ಕೂಡ ಊಹಿಸಿರಲಿಲ್ಲ. ಆದರೆ ಮಂಜುಳಾ ಅವರು ಇದ್ದಕ್ಕಿದ್ದ ಹಾಗೆ ಕನ್ನಡ ಚಿತ್ರರಂಗದಿಂದ ದೂರ ಆಗಿದ್ದನ್ನು ಕಂಡು ಕನ್ನಡ ಚಿತ್ರರಂಗ ನಿಬ್ಬೆರಗಾಗಿತ್ತು ಮತ್ತು ಇವರ ಅಭಿಮಾನಿಗಳಿಗೆ ಈ ವಿಚಾರ ನುಂಗಲಾದಗದಂತಹ ಕಹಿ ಘಟನೆ ಆಗುತ್ತ ಇದೆ. ಇವತ್ತಿಗೂ ಕೂಡ ಹೊನ್ನೇನಹಳ್ಳಿ ಅಲ್ಲಿ ಮಂಜುಳಾ ಅವರ ಸಮಾಧಿ ಇದ್ದು, ಇದರ ಸುತ್ತ ಇದೀಗ ಲೇ ಔಟ್ ಆಗುತ್ತಾ ಇದೆ ಆದರೆ ಇಲ್ಲಿಯ ಸ್ಥಳಿಯರು ಮಂಜುಳಾ ಅವರ ಸಮಾಧಿಗೆ ಯಾವ ತೊಂದರೆಯೂ ಆಗದಿರುವ ಹಾಗೆ ಕಾಪಾಡಿಕೊಂಡು ಬಂದಿದ್ದರೆ..

Leave a Reply

Your email address will not be published. Required fields are marked *