Categories
ಸಿನಿಮಾ

ರವಿಚಂದ್ರನ್ ಅವರ ಜೊತೆ ನಟಿಸಿದ್ದ ಖ್ಯಾತ ನಟಿ ಯಮುನಾ ಅವರ ನಿಜವಾದ ವಯಸ್ಸು ಎಷ್ಟು ಗೊತ್ತ … ಈಗ ಇವರು ಜೀವನದಲ್ಲಿ ಏನು ಮಾಡುತ್ತಿದ್ದಾರೆ ನೋಡಿ…

ನಮಸ್ತೆ ಪ್ರಿಯ ಸ್ನೇಹಿತರೆ ಇವತ್ತಿಗೂ ಸಹ ಹಳೆಯ ನಟಿಯರು ಇವತ್ತಿನ ಯುವ ನಟಿಯರಿಗೆ ಕಡಿಮೆಯಿಲ್ಲವೆಂಬಂತೆ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿರುತ್ತಾರೆ ಅದೇ ರೀತಿ ಮೌನ ಪೋರಾಟಂ ಎಂಬ ತೆಲುಗು ಸಿನೆಮಾ ಮೂಲಕ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟ ನಟಿ, ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಪಾರ ಯಶಸ್ಸು ಪಡೆದುಕೊಂಡಿದ್ದಾರೆ ಹೌದು ಈ ನಟಿ ಕನ್ನಡ ಸಿನಿಮಾರಂಗದಲ್ಲಿ ಸಹ ಕೆಲವೊಂದು ಚಲನಚಿತ್ರಗಳಲ್ಲಿ ಅಭಿನಯ ಮಾಡಿದ್ದು ಸ್ಯಾಂಡಲ್ ವುಡ್ ನಲ್ಲಿಯೂ ಕೂಡ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಈ ನಟಿಯನ್ನು ಈ ನಟಿಯ ಅಭಿನಯವನ್ನ ನೋಡಿದರೆ ಇವರಿಗೆ 49ವರ್ಷ ಅಂತ ಯಾರು ಹೇಳುವುದಿಲ್ಲ ಅಷ್ಟು ಸೊಗಸಾಗಿ ಇರುವ ಈ ನಟಿ ದಕ್ಷಿಣ ಭಾರತದಲ್ಲಿಯೇ ಬಹಳ ಬೇಡಿಕೆ ಇರುವಂತಹ ನಟಿ ಆಗಿದ್ದಾರೆ. ಹೌದು ಈ ನಟಿ ಬೇರೆ ಯಾರು ಅಲ್ಲ ನಟಿ ಯಮುನಾ.

ಇದಕ್ಕೂ ಮುನ್ನ ತಮಿಳಿನಲ್ಲಿ ನಟಿ ಸುಹಾಸಿನಿ ಅವರಿಗೆ ತಂಗಿ ಪಾತ್ರದಲ್ಲಿ ಒಂದು ಚಿಕ್ಕ ಸನ್ನಿವೇಶದಲ್ಲಿ ಅಭಿನಯ ಮಾಡಿದ್ದ ಇವರು ಮೊದಲಿನ ಹೆಸರು ಪ್ರೇಮ ಎಂದು ಆನಂತರ ಇವರಿಗೆ ಜನಪ್ರಿಯ ನಿರ್ದೇಶಕರಾಗಿರುವ ಬಾಲಚಂದರ್ ಎಂಬುವವರು ಇವರ ಹೆಸರನ್ನು ಬದಲಾಯಿಸುತ್ತಾರೆ. ನಟಿ ಯಮುನಾ ಅವರು ಕನ್ನಡ ತೆಲುಗು ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡುವ ಮೂಲಕ ದಕ್ಷಿಣ ಭಾರತ ಭಾರತ ಚಿತ್ರರಂಗದಲ್ಲಿ ಖ್ಯಾತ ನಟಿಯಾಗಿದ್ದ ತಾರೆ ಹಾಗೂ ಬಹಳ ಬೇಡಿಕೆ ಇರುವಂಥ ನಟಿಯಾಗಿದ್ದಾರೆ ಹೌದು ಇವರ ವಯಸ್ಸು ನೋಡಿದರೆ ಇವರಿಗೆ ಅಷ್ಟೊಂದು ಅಂತ ಅನಿಸುವುದೇ ಇಲ್ಲ ಖಂಡಿತವಾಗಿಯೂ ಇನ್ನೂ ಚಿಕ್ಕ ಹುಡುಗಿಯಂತೆ ಕಾಣುವ ಇವರು ಕನ್ನಡ ಸಿನಿಮಾರಂಗದ ಕೂಡ ಅಭಿನಯ ಮಾಡಿದ್ದಾರೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಇನ್ನು ನಮ್ಮ ಕನ್ನಡದಲ್ಲಿ 1989 ರಂದು ಮೋಡದ ಮರೆಯಲ್ಲಿ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಾರೆ ನಟಿ ಯಮುನ. ಇದಾದ ಮೇಲೆ ಮಾವನಿಗೆ ತಕ್ಕ ಅಳಿಯ, ಹೆಂಡ್ತೀರೆ ಹುಷಾರು, ಕೆರಳಿದ ಸರ್ಪ, ಚೆನ್ನ, ಪ್ರೇಮಗೀತೆ, ಹಲೋ ಯಮ, ಶ್ರೀ ಮಂಜುನಾಥ, ಹಾಗೇ ಸುಮ್ಮನೆ, ನಾರಿಯ ಸೀರೆ ಕದ್ದ, ಕಂಠೀರವ, ಶಂಭೋ ಶಂಕರ, ದಿಲ್ ರಂಗೀಲ, ರಾಜ ಹಂಸ ಚಿತ್ರಗಳಲ್ಲಿ ನಟಿಸಿದ್ದಾರೆ.

ನಟಿ ಯಮುನಾ ಅವರು 2017 ರಲ್ಲಿ ಕೊನೆಯದಾಗಿ ಕನ್ನಡದಲ್ಲಿ ರಾಜಹಂಸ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ ಚಿನ್ನ ಸಿನಿಮಾದಲ್ಲಿ ಯಮುನಾ ಅವರ ನಾಯಕಿ ನಟಿಯಾಗಿ ನಟಿಸಿ ಕನ್ನಡದಲ್ಲಿ ತುಂಬಾನೇ ಜನಪ್ರಿಯ ಆದರು ಎಂದು ಹೇಳಬಹುದು. ಇವರು ಕನ್ನಡದಲ್ಲಿ ಮೊತ್ತ 14 ಚಿತ್ರಗಳಲ್ಲಿ ನಟಿಸಿದ್ದಾರೆ.

ಈ ರೀತಿ ನಟಿ ಯಮುನಾ ಅವರು ಎಲ್ಲಾ ಭಾಷೆಗಳಲ್ಲಿಯೂ ಸೇರಿ ಸುಮಾರು 50ಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯ ಮಾಡಿದ್ದು ನಟಿ ಯಮುನಾ ಅವರು ಕನ್ನಡದಲ್ಲಿ ಕಿರುತೆರೆಯಲ್ಲಿ ಲಕ್ಷ್ಮೀ ಲಕ್ಷ್ಮೀ ಜಾನ್ಸಿಯ ಮಗಳು ದೇವಿ ಎಂಬ ಧಾರಾವಾಹಿಗಳಲ್ಲಿ ಕೂಡ ಅಭಿನಯ ಮಾಡಿ ಸೈ ಎನಿಸಿಕೊಂಡಿತು ಇವರು ಕಿರುತೆರೆ ಜಗತ್ತಿನಲ್ಲಿ ಕೂಡ ಅಪಾರ ಯಶಸ್ಸು ಪಡೆದುಕೊಂಡಿದ್ದಾರೆ. ಪ್ರಸ್ತುತ ಯಮುನಾ ಅವರು ತೆಲುಗು ಮತ್ತು ತಮಿಳು ಧಾರಾವಾಹಿಗಳಲ್ಲಿ ಅಭಿನಯ ಮಾಡುತ್ತಾ ಇದ್ದಾರೆ ನಟಿ ಯಮುನಾ ಹೌದು ಇವತ್ತಿಗೂ ತಮ್ಮ ಛಾಪನ್ನ ಅದೇ ರೀತಿ ಉಳಿಸಿಕೊಂಡು ಧಾರಾವಾಹಿಗಳಲ್ಲಿ ಅಭಿನಯ ಮಾಡುತ್ತಾ ,

ಇಂದಿಗೂ ಕಲಾ ಸೇವೆಯಲ್ಲಿ ನಿರತರಾಗಿರುವ ನಟಿ ಯಮುನಾ ಅವರ ಫೋಟೋಗಳನ್ನ ನೀವು ಈ ಮಾಹಿತಿ ಅಲ್ಲಿ ಕಾಣಬಹುದಾಗಿದೆ. ಹೌದು ನಟಿ ಯಮುನಾ ಅವರು ಸ್ಯಾಂಡಲ್ ವುಡ್ ಗೆ ಬಹಳ ವರುಷಗಳ ಹಿಂದೆಯೇ ಬಂದವರು ಆನಂತರ ಮತ್ತೆ ಯುವ ನಟರೊಂದಿಗೂ ಅಭಿನಯ ಮಾಡುವ ಮೂಲಕ ಇಲ್ಲಿನ ಯಂಗ್ ನಟಿಯರಿಗೂ ಸಹ ಇವರ ಪರಿಚಯವಿದೆ ಹಾಗಾದರೆ ನಟಿ ಯಮುನಾ ಅವರ ಅಭಿನಯದ ಸಿನಿಮಾಗಳ ನೀವು ಸಹ ನೋಡಿದ್ದಲ್ಲಿ ಇವರ ಅಭಿನಯ ಕುರಿತು ನಿಮ್ಮ ಅನಿಸಿಕೆ ಅನ್ನು ಮರೆಯದೆ ಕಾಮೆಂಟ್ ಮಾಡಿ ಶುಭದಿನ ಧನ್ಯವಾದ.

Leave a Reply

Your email address will not be published. Required fields are marked *