ಹೇಗೆ ಎಲ್ಲರೂ ಕೆಲಸ ಮಾಡಿದರೆ ಅವರಿಗೆ ತಿಂಗಳಿಗೆ ಇಷ್ಟು ಸಂಭಾವನೆ ಎಂದು ಕೊಡುತ್ತಾರೆ ಅದೇ ರೀತಿ ಫಿಲ್ಮ್ ಇಂಡಸ್ಟ್ರಿಯ ಅಲ್ಲಿಯೇ ಚಿಕ್ಕ ಚಿಕ್ಕ ಪಾತ್ರ ಮಾಡುವವರಿಗೂ ಕೂಡ ಇಂತಿಷ್ಟು ಸಂಭಾವನೆ ಎಂದು ನೀಡಲಾಗುತ್ತದೆ ಅದೇ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಿನಿಮಾದ ಆಕರ್ಷಣೀಯ ಪಾತ್ರವಾಗಿರುವ ನಾಯಕನಟನಿಗೆ ಎಷ್ಟು ಸಂಭಾವನೆ ಕೊಡುತ್ತಾರೆ ಗೊತ್ತಾ ಹೌದು ಸಿನೆಮಾಗಳ ಆಧಾರದ ಮೇಲೆ ಬಜೆಟ್ ಆಧಾರದ ಮೇಲೆ ನಟರ ಸಂಭಾವನೆ ಅನ್ನೂ ಸಹ ಫಿಕ್ಸ್ ಮಾಡಲಾಗಿರುತ್ತದೆಯೋ ಅದೇರೀತಿ ಬಾಲಿವುಡ್ ಟಾಲಿವುಡ್ ಕಾಲಿವುಡ್ ಗಳಲ್ಲೂ ನಟರು ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಾರೆ .
ಎಂಬ ಮಾತನ್ನು ಕೇಳಿರುತ್ತಿರಿ ಎನ್ನುವುದು ನಮ್ಮ ಸ್ಯಾಂಡಲ್ ವುಡ್ ನಲ್ಲಿಯೂ ಸಹ ನಟರು ಸಂಭಾವನೆ ಪಡೆದುಕೊಳ್ಳುವುದರಲ್ಲಿ ಕಡಿಮೆ ಏನೂ ಇಲ್ಲ ಹೌದು ನಮ್ಮ ಕನ್ನಡ ಇಂಡಸ್ಟ್ರಿ ಅಲ್ಲಿಯೂ ಸಹ ನಮ್ಮ ನಟರು ಕೋಟಿ ಕೋಟಿ ಸಂಭಾವನೆ ಪಡೆದು ಬೇರೆ ವ್ಯವಹಾರಗಳನ್ನು ಸಹ ಮಾಡುತ್ತಾ ಭಾರೀ ಆಸ್ತಿ ಅನ್ನೋ ಹೊಂದಿದ್ದಾರೆ ಹಾಗಾದರೆ ನಮ್ಮ ಸ್ಯಾಂಡಲ್ ವುಡ್ ನ ನಾಯಕರುಗಳಲ್ಲಿ ಹೆಚ್ಚು ಆಸ್ತಿಯನ್ನು ಹೊಂದಿರತಕ್ಕಂತಹ ನಟ ಯಾರು ಹೆಚ್ಚು ಸಂಭಾವನೆ ಯಾರು ಪಡೆದುಕೊಳ್ಳುತ್ತಾರೆ ಇದನೆಲ್ಲ ತಿಳಿಯೋಣ ಇಂದಿನ ಲೇಖನದಲ್ಲಿ.
ನಮ್ಮ ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಎಂದೇ ಪ್ರಖ್ಯಾತಿ ಪಡೆದುಕೊಂಡಿರುವ ನಟ ಉಪೇಂದ್ರ ಅವರು ನಟ ಹಾಗೂ ನಿರ್ಮಾಪಕರು ಕೂಡ ಹೌದು. ಇವರ ನಟನೆ ಮಾತ್ರವಲ್ಲ ಜೊತೆಗೆ ಹಲವಾರು ಅಪಾರ್ಟ್ ಮೆಂಟ್ ಗಳನ್ನು ಕೂಡ ಹೊಂದಿದ್ದಾರೆ ಜೊತೆಗೆ ರೆಸಾರ್ಟ್ ಅನ್ನು ಕೂಡ ಹೊಂದಿದ್ದಾರೆ ಉಪ್ಪಿ. 140 ರಿಂದ 160 ಕೋಟಿ ವ್ಯವಹಾರ ಮಾಡುತ್ತಿರುವ ಉಪ್ಪಿ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹ್ಯಾಟ್ರಿಕ್ ಹೀರೋ ಅಂತಾನೇ ಪ್ರಖ್ಯಾತಿ ಪಡೆದುಕೊಂಡಿರುವ ನಟ ಶಿವಣ್ಣ ಅವರು ಒಂದೂವರೆ ಎಕರೆಯಲ್ಲಿ ಬಹು ದೊಡ್ಡದಾದ ಐಷಾರಾಮಿ ಮನೆ ಅನ್ನು ಕಟ್ಟಿಸಿ ಕೊಂಡಿದ್ದು, ಬೆಂಗಳೂರು ಸೇರಿದಂತೆ ಹಲವಾರು ಕಡೆ ವ್ಯವಹಾರದಲ್ಲಿ ಬಂಡವಾಳ ವನ್ನು ಸಹ ಹೂಡಿದ್ದಾರೆ ನಟ ಶಿವಣ್ಣ 180 ರಿಂದ 220 ಕೋಟಿಯ ವರೆಗೂ ವ್ಯವಾರ ಮಾಡುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟ ಕಿಚ್ಚ ಸುದೀಪ್ ಅವರು ತೆಲುಗು ತಮಿಳು ಹಾಗೂ ಬಾಲಿವುಡ್ ಚಿತ್ರರಂಗದಲ್ಲೂ ಸಹ ಇವರು ಸಕ್ರಿಯರಾಗಿದ್ದಾರೆ. ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿರುವ ಇವರು ಕಿಚ್ಚ ಕ್ರಿಯೇಶನ್ ಹಾಗೂ ಸರೋವರ ಗ್ರೂಪ್ ಮಾಲೀಕರು ಆಗಿದ್ದಾರೆ. ಇನ್ನು ಇವರ ವ್ಯವಹಾರವನ್ನು ನೋಡುವುದಾದರೆ 200 ರಿಂದ 250 ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಾರೆ ಕಿಚ್ಚಾ.
ಕನ್ನಡ ಚಿತ್ರರಂಗದಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಡಿ ಬಾಸ್ ದರ್ಶನ್ ಅವರು ಅಭಿಮಾನಿಗಳ ನೆಚ್ಚಿನ ನಟ. ಡಿ ಬಾಸ್ ಅವರು ಸಿನಿಮಾಗಳ ಜೊತೆಗೆ ಸಾಕಷ್ಟು ವ್ಯವಹಾರಗಳನ್ನು ಕೂಡ ಹೊಂದಿದ್ದಾರೆ. ನಟ ದರ್ಶನ್ ಅವರು ಸುಮಾರು 120 ರಿಂದ 170 ಕೋಟಿ ರೂಪಾಯಿ ವ್ಯವಹಾರವನ್ನು ಮಾಡುತ್ತ ಇದ್ದಾರೆ.ಕನ್ನಡ ಚಿತ್ರರಂಗದ ಆರಾಧ್ಯದೈವ ನಟಸಾರ್ವಭೌಮ ಡಾ. ರಾಜಕುಮಾರ್ ಅವರ ಪ್ರೀತಿಯ ಪುತ್ರ ಪುನೀತ್ ರಾಜಕುಮಾರ್ ತಂದೆ ಅವರಂತೆ ಸಿನಿಮಾಗಳನ್ನು ಮಾಡುವ ಮೂಲಕ ಚಿತ್ರರಂಗದ ಬಹುಬೇಡಿಕೆಯ ನಟರಾಗಿದ್ದಾರೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ತಮ್ಮ ನೃತ್ಯದ ಮೂಲಕ ಯುವ ಪೀಳಿಗೆಯ ಗಮನ ಸೆಳೆದಿರುವ ಇವರು ಯೂತ್ ಐಕಾನ್ ಎಂದ ಜನಪ್ರಿಯತೆ ಹೊಂದಿದ್ದಾರೆ. ಆಸ್ತಿಗಳ ಮೇಲೆ ಹೂಡಿಕೆ ಮಾಡಿದ್ದು ಇವರು 200 ರಿಂದ 300 ಕೋಟಿ ರೂಪಾಯಿಯವರೆಗೂ ವ್ಯವಹಾರ ಮಾಡುತ್ತಾರೆ.
ಕನ್ನಡ ಚಿತ್ರರಂಗದಲ್ಲಿ ಅನೇಕ ಏಳುಬೀಳುಗಳನ್ನು ಕಂಡು ಇದೀಗ ಕೆಜಿಎಫ್ ಸಿನಿಮಾದ ಮೂಲಕ ಅಂತರಾಷ್ಟ್ರೀಯ ನಟನಾಗಿ ಹೊರಹೊಮ್ಮಿರುವ ನಟ ಯಶ್ ಅವರು ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ಹಲವೆಡೆ ಪ್ರಾಪರ್ಟಿ ಆಗು ಕೋಟಿ ಕೋಟಿ ಬೆಲೆಬಾಳುವ ಶೇರುಗಳನ್ನು ಹೊಂದಿದ್ದು, 100 ರಿಂದ 110 ಕೋಟಿ ರೂಪಾಯಿಯ ವರೆಗೆ ವ್ಯವಹಾರ ಮಾಡುತ್ತಾರೆ.ಇನ್ನೂ ಗೋಲ್ಡನ್ ಸ್ಟಾರ್ ಗಣೇಶ್ ಅವರು ಪ್ರೇಮ ಕಥಾ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಇನ್ನು ಇವರು ದೊಡ್ಡ ಮೊತ್ತದ ಷೇರು ಹೊಂದಿದ್ದು ಅನೇಕ ಪ್ರಾಪರ್ಟಿಗಳ ಮೇಲೆ ಹಣ ಹೂಡಿಕೆ ಮಾಡಿದ್ದಾರೆ. ಇವರು 100 ರಿಂದ 150 ಕೋಟಿ ರೂಪಾಯಿಯ ವರೆಗೆ ವ್ಯವಾರ ಮಾಡುತ್ತಾರೆ ಎಂದು ಹೇಳಲಾಗಿದೆ.