Categories
ಸಿನಿಮಾ

ದಕ್ಷಿಣ ಭಾರತದ ಖ್ಯಾತ ಕಳ ನಟ ರಘುವರನ್ ಪತ್ನಿ ಹೇಗಿದ್ದಾರೆ ನೋಡಿ …ಮೊದಲ ಬಾರಿಗೆ ನಮ್ಮಲ್ಲೇ ಮೊದಲು

ಸಿನಿಮಾರಂಗದಲ್ಲಿ ಸಾಕಷ್ಟು ಜನ ಬರುತ್ತಾರೆ ಸಾಕಷ್ಟು ಜನ ಹೋಗುತ್ತಾರೆ ಹಾಗಂತ ಎಲ್ಲರೂ ಸಹ ಫೇಮಸ್ ಆಗುವುದಿಲ್ಲ. ಹೌದು ತಮ್ಮ ನಟನೆಯ ಮೂಲಕ ಅಪಾರ ಯಶಸ್ಸು ಪಡೆದುಕೊಂಡು ಜನಪ್ರಿಯತೆ ಪಡೆದುಕೊಂಡು ತಾವು ಸಿನಿಮಾ ರಂಗದಿಂದ ದೂರ ಉಳಿದ ನಂತರವೂ ಸಹ ಜನರ ಮನಸ್ಸಿನಲ್ಲಿ ತಮ್ಮ ಅಭಿನಯದ ಮೂಲಕ ನೆನಪಿನಲ್ಲಿರುವ ಹಲವು ನಟರು ಗಳಲ್ಲಿ ಇವರೂ ಒಬ್ಬರು ಹೌದು ಇವರು ಅಭಿನಯ ಮಾಡಿದ್ದು ನಟ ಹಾಗೂ ಖಳನಟನ ಪಾತ್ರ ಗಳು ದಕ್ಷಿಣ ಭಾರತದ ಚಲನಚಿತ್ರ ರಂಗದಲ್ಲಿ ಇವರ ಅಭಿನಯವನ್ನು ಯಾರೂ ಸಹ ಮರೆಯುವಂತಿಲ್ಲ ಹೌದು ನಾವು ಈ ದಿನದ ಲೇಖನದಲ್ಲಿ ಮಾತನಾಡುತ್ತ ಇರುವುದು ಖಳನಟ ಹಾಗೂ ನಟ ಮತ್ತು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ರಘುವರನ್ ಅವರ ಬಗ್ಗೆ. ನಟ ರಘುವರನ್ ಅವರು ಡಿಸೆಂಬರ್ 11 1948ರಲ್ಲಿ ಜನಿಸಿದರು. ಈ ನಟ ಸಿನಿಮಾ ರಂಗಕ್ಕೆ ಬಂದ ನಂತರ ಮೊದಮೊದಲು ಇವರಿಗೆ ಅಷ್ಟು ಯಶಸ್ಸು ಕಾಣಲಿಲ್ಲ ಆದರೆ ತಾಳ್ಮೆಯಿಂದ ಇವರು ಸಿನಿಮಾರಂಗದಲ್ಲಿ ಮುಂದುವರೆದು ತಾನೇನೆಂದು ತನ್ನ ನಟನೆ ಏನೆಂದು ಜನರಿಗೆ ತಿಳಿಸಿದ್ದಾರೆ.

ನಟ ರಘುವರನ್ ಅವರು ಅತ್ಯದ್ಭುತ ನಟ ಇವರು ತಮಿಳು ತೆಲುಗು ಮಲಯಾಳಂ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಇವರು ನಟನೆಗೆ ಬರುವ ಮುನ್ನ ತಮ್ಮ ಬಿ.ಎ ಪದವಿಯನ್ನು ಅರ್ಧದಲ್ಲಿಯೆ ಬಿಟ್ಟು ಬಂದು ಸಿನಿಮಾ ರಂಗಕ್ಕೆ ಸೇರಿಕೊಂಡರು. ನಟ ರಘುವರನ್ ಅವರ ತಂದೆಯ ಹೆಸರು ಚಂಕಮಣ್ಣತ್ತು ಎನ್ ಆರ್ ವೇಲಾಯುತಂ  ನಾಯರ್ ಮತ್ತು ತಾಯಿಯ ಹೆಸರು ಕಸ್ತೂರಿ ಚಕಂಗುಲ್ ಎಂದು.

ನಟ ರಘುವರನ್ ಅವರ ಸಿನಿ ಜಗತ್ತಿನ ಪಯಣದ ಕುರಿತು ಹೇಳಬೇಕಾದರೆ ಈ ನಟ ಮೊದಲು ಮಲಯಾಳಂನಲ್ಲಿ 1982 ರಲ್ಲಿ ಕಕ್ಕಾ ಎಂಬ ಸಿನಿಮಾದ ಮೂಲಕ ಮೊದಲನೆಯದಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ಇನ್ನೂ ನಮ್ಮ ಕನ್ನಡದಲ್ಲಿ 1996 ರಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಕಲಾವಿದ ಜೈ ಹಿಂದ್ ಗೌರ್ನಮೆಂಟ್, ಪ್ರತ್ಯರ್ಥ ಮತ್ತು ದುರ್ಗಿ ಎಂಬ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ನಟ ರಘುವರನ್ ಅವರು.

ಇನ್ನು ನಟ ರಘುವರನ್ ಅವರು 1996 ರಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಆಗಿರುವ ರೋಹಿಣಿ ಅವರನ್ನು ವಿವಾಹವಾಗಿದ್ದಾರೆ. ನಟ ರಘುವರನ್ ಅವರ ಪತ್ನಿಯಾಗಿರುವ ರೋಹಿಣಿ ಅವರು ಸಹ ಫೇಮಸ್ ನಟಿ ಹೌದು ಇವರು ಕೂಡ ತೆಲುಗು ತಮಿಳು ಕನ್ನಡ ಮತ್ತು ಮಲಯಾಳಂನಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ನಟಿ ರೋಹಿಣಿ ಅವರು ಕನ್ನಡದಲ್ಲಿ ಚಾಮುಂಡೇಶ್ವರಿ ಪೂಜೆ ಮಹಿಮೆ ಎಂಬ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಇದಾದ ಬಳಿಕ ಜಗದೇಕವೀರ ಮತ್ತು  ನಿನ್ನಿಂದಲೇ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ ಎನ್ನುವ ಇವರು ಸಹ ಕನ್ನಡದಲ್ಲಿ ಮೊದಲು ನಟಿಯಾಗಿ ನಟನೆ ಮಾಡುತ್ತಾ ಇದ್ದರು.

ಆ ನಂತರ ನಟಿ ರೋಹಿಣಿ ಅವರು ಸಾಕಷ್ಟು ಚಲನ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ತುಂಬ ಸೊಗಸಾಗಿ ನಟನ ಮಾಡುತ್ತ ಇದ್ದಾರೆ. ಇನ್ನು ಇವರಿಗೆ ಸಾಯಿ ರಿಷಿ ವರಣ್ ಎಂಬ ಮಗ ಕೂಡ ಇದ್ದಾನೆ. ಈತನಿಗೆ ಈಗ 24 ವರ್ಷಗಳಾಗಿವೆ. ನಟ ರಘುವರನ್ ಅವರು ಮಾರ್ಚ್ 19 2008 ರಲ್ಲಿ ಅಧಿಕ ಮದ್ಯಪಾನ ಸೇವನೆ ಮಾಡಿದ್ದರಿಂದ ಇಹಲೋಕ ತ್ಯಜಿಸಿದರು ಹೌದು ನಟ ರಘುವರನ್ ಅವರ ಪತ್ನಿ ಉತ್ತಮ ಸಾಂಸಾರಿಕ ಜೀವನದಲ್ಲಿ ಹೊಂದಾಣಿಕೆ ಆಗದಿರುವ ಕಾರಣ ವಿಚ್ಛೇದನ ಪಡೆದುಕೊಂಡಿದ್ದರು ಅನಂತರ ನಟ ರಘುವರನ್ ಅವರಿಗೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗುತ್ತಾ ಬಂದವು ಈ ಎಲ್ಲ ಕಾರಣಗಳಿಂದ ಮತ್ತೆ ಹೆಚ್ಚು ಮದ್ಯಪಾನ ಸೇವನೆ ಮಾಡಲು ಶುರು ಮಾಡಿದ ನಟ ರಘುವರನ್ ಅವರು ಆರೋಗ್ಯ ಸಮಸ್ಯೆಯಿಂದ ಇಹಲೋಕ ತ್ಯಜಿಸಿದರು. ನಟ ರಘುವರನ್ ಅವರು ಅದೆಂತಹ ಅತ್ಯಾದ್ಭುತ ನಟರಾಗಿದ್ದರೂ ಆದರೆ ಇವರ ಕೊನೆ ಕಾಲದಲ್ಲಿ ಇವರು ಬಹಳ ಕಷ್ಟಗಳನ್ನು ಎದುರಿಸಿದರು

Leave a Reply

Your email address will not be published. Required fields are marked *

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.